ನನ್ನೊಳಗಿನ ಬೇತಾಳ ಮಾತಾಡ್ತಾ ಇದೆ

ಸುತ್ತಾ-ಮುತ್ತಾ ಯೇನ್ ನೋಡ್ತೀ...

Thursday 21 February 2013

ಶಿಕ್ಷಣ

          ನಮ್ಮನ್ನು ಆಳುವವರಿಗೆ ನಮ್ಮ ದೇಶದ ಎಲ್ಲಾ ಮಕ್ಕಳಿಗೆ ಒಳ್ಳೇ ಶಿಕ್ಷಣ ಕೊಡಬೇಕೂ ಅನ್ನೂ ಮನಸ್ಸು ಇದೆಯಾ..? ಅದಕ್ಕಾಗಿ ಸಂವಿಧಾನ ಏನೋ ಹೇಳಿದೆ .. ಎಲ್ಲರಿಗೂ ಉಚಿತ ಕಡ್ಡಾಯ ಪ್ರಾಥಮಿಕ ಶಿಕ್ಷಣ ದೊರಕಬೇಕು ಅಂತ... ಅದಕ್ಕೇ ಇವರೂ ವರ್ಷಕ್ಕೊಂದು ಹೊಸಾ ಹೊಸಾ ಯೋಜನೆ ಮೂಲಕ ದುಡ್ಡು ಸುರೀತಾನೇ ಇದ್ದಾರೆ.. ಭಾಷಣಗಳಲ್ಲಿ ಹೇಳ್ತಾನೇ ಇದ್ದಾರೆ ಎಲ್ಲೋರಿಗೂ ಶಿಕ್ಷಣಾ ಸಿಗಬೇಕೂ... ಎಲ್ಲರೂ ಸಾಕ್ಷರರಾಗಬೇಕೂ. ೧೦ ನೇ ತರಗತಿ ವರೆಗೆ ಎಲ್ಲಾ ಮಕ್ಕಳೂ ಕಲೀಲೇ ಬೇಕೂ..ಅದಕ್ಕಾಗಿ ಏನ್ ಬೇಕೋ ಅದ್ ಮಾಡ್ತೀವೀ... ಬಟ್ಟೆ ಕೊಡ್ತೀವಿ, ಊಟಾ ಕೊಡ್ತೀವಿ,,, ಸೈಕಲ್ ಕೊಡ್ತೀವಿ,,ಪುಸ್ತಕಾ ಕೊಡ್ತೀವಿ,, ಶೈಕ್ಷಣಿಕ ಪ್ರವಾಸ ಮಾಡಿಸ್ತೀ ವಿ. . ರೂಂ ಕೊಡ್ತೀವಿ.. ಎಲ್ಲಾ ಕೊಡ್ತೀವಿ...ಅಂತಾ... ಆದ್ರೆ ಒಳ್ಳೇ ಶಿಕ್ಷಣಾ ಕೊಡ್ತೀವಿ ಅನ್ನೋ ಒಂದೇ ಒಂದು ಯೋಜನೇನೂ ಇಲ್ವೇ ಇಲ್ಲಾ..!!!!! ಹೆತ್ತರಿಕೆ....!!! ಅಂದ್ರೆ ನಿಮಗೆಲ್ಲಾ ಶಿಕ್ಷಣಾ ಕೊಟ್ಬುಟ್ಟು ೧೦ ಕ್ಲಾಸ್ ಪಾಸಾದ್ರೆ... ನಮಗೆ ವೋಟಾಕಾಕೇ ಬ ರ್ತೀರಾ...ಊಹೂಂ ಖಂಡಿತಾ ಬರಲ್ಲಾ...ಅದ್ಕೇ....ಸಂವಿಧಾನ ಏನೋ ಹೇಳ್ ಬಿಟ್ಟಿದೆ..ಕೊಡಬೇಕೂ ಅಂತ ಅದರ ವಿರುದ್ಧವಾಗಿ ಮಾತಾಡೋ ಹಾಗಿಲ್ಲಾ... ಅದ್ಕೇ ಅಂತೀವಪ್ಪಾ.. ಆದ್ರೆ ಮೇಸ್ಟ್ರುಗಳಿಗೆ ಪಾಠ ಮಾಡೋಕೆ ಬಿಟ್ರೆ ತಾನೇ ನೀವ್ ಕಲಿ ಯೋದೂ... ನೀವ್ ಕಲತರೆ ಮತ್ತೆ ನಮ್ಮನ್ ಮಾತಾಡ್ಸಲ್ಲಾ... ವೋಟೂ ಹಾಕ ಲ್ಲಾ,,, ಅದ್ಕೇ ಮಗೂನೂ ಚಿವುಟ್ತೀವಿ ತೊಟ್ಳನ್ನೂ ತೂಗ್ತೀವಿ...!!!!!ಹ್ಯಾಂಗೇ... ಇಲ್ಲೊಬ್ರು ಒಳ್ಳೇ ಮೇಸ್ಟ್ರು ಇದ್ರು... ಆಶಾಲೆಗೆ ೧೯೯೬ ಬಂದ್ರಂತೆ... ತುಂಬಾ ಚೆನ್ನಾಗಿ ಪಾಠ ಮಾಡ್ತಿದ್ರೂ ಆವಾಗ್ ಅವಕೈಯ್ಯಲ್ಲಿ ಓದಿದ್ ಮಕ್ಕಳು ಇಂದೂ ಅವರನ್ನು ಕಂಡು ಮಾತಾಡಿಸಿಕೊಂಡು ಹೋಗೋದನ್ನು ನೋಡಿದ್ದೇನೆ... ಆದ್ರೆ... ೨೦೦೭ರಲ್ಲಿ ಅದೇ ಶಾಲೆಯಲ್ಲಿ ಈ ರಾಜಕೀಯ ಅನ್ನೊದು ಪ್ರವೇಶ ಮಾಡ್ತು... ಆ ಮೇಸ್ಟ್ರ ಮೇಲೆ ಸುಮ್ ಸುಮ್ಮನೇ ಅಪವಾದಗಳು..ಸಿಲ್ಲಿ ಅಪವಾದಗಳು ಬರೋಕೆ ಶುರು ಆಯ್ತು... ಯಾರೋ ಒಬ್ಬ ಅಪ್ಪ ತನ್ ಮಗನೀಗೆ ಯೇಕೆ ಹೊಡೀತೀಯಾ ಅಂತ ತಗಾದೆ ತೆಗದು ರಾಮಾ ರಂಪ ಮಾಡಿದ... ಆಯ್ತು ಇನ್ನು ಹಾಗಾಗಲ್ಲಪ್ಪಾ ಅಂತ ಕಳಿಸಿದ್ದಾಯ್ತು.... ಮೇಸ್ಟ್ರು ಅದೇ ಶಾಲೆಯಲ್ಲಿ ಇದ್ದಾರೆ... ( ಗುಟ್ಟಿನಲ್ಲಿ ಅವ್ರು ಹೇಳಿದ್ದು) ಆದ್ರೆ..ಅಂದು ಎರಡು ಮೂರನೆ ಕ್ಲಾಸಿನ ಮಕ್ಕಳು ಮಗ್ಗಿ ಹೇಳಿ ವಾಕ್ಯ ಬರದು ತುಂಬಾ ಚೆನ್ನಾಗಿ ಕಲಿಕೆ ಮಾಡುತ್ತಿದ್ದವರು..ಇಂದು ಆಆಶಾಲೆಗೆ ಹೋಗಿ ನೋಡಿದರೇ... ಅಳು ಬರುತ್ತೇರೀ... ೫ ವರ್ಷದಲ್ಲಿ ಆ ಊರಿನ ಮಕ್ಕಳ ಅಂದರೆ ಒಂದು ಪೀಳಿಗೆಯ ಸರ್ವನಾಶ ಆಗೋಯ್ತು...೭ನೇ ಕ್ಲಾಸ್ ಹುಡುಗನಿಗೆ ಸ್ವಾತಂತ್ರ್ಯ ಅಂತ ಬರೆಯೋಕೆ ಬರೊಲ್ಲಾ... "ಸ್ವಾತತರ" ಅಂತ ಬರೆದೋನೇ ಕ್ಲಾಸಲ್ಲಿ ಹುಶಾ ರಿ ಹುಡುಗ...!!!! ಸಾಕಲ್ಲವಾ... ಅದ್ಕೇ ಹೇಳ್ತೀನಿ.... ವೈದ್ಯ..ಒಂದು ರೋಗಿಯ ಜೀವ ತೆಗೀಬಹುದು ಆಲಸ್ಯ-ಅಸಡ್ಡೆ ಮಾಡಿದರೆ..ಆದರೆ..ಅದೇ ಅಸಡ್ಡೆನಾ ಒಬ್ಬ ಶಿಕ್ಷಕ ಮಾಡಿದರೆ..ಹಾಗೆ ಅವನ ಮನಸ್ಸಿಗೆ ನೋವು ಉಂಟು ಮಾಡಿದರೆ... ಇಡೀ ಒಂದು ಸಮುದಾಯದ ಒಂದು ಪೀಳಿಗೆಯ ಜನರ ಜೀವನವನ್ನೇ ಸರ್ವನಾಶ ಮಾಡಿಬಿಡಬ ಹುದು... ಹಾಗಾಗಿ... ಅಪ್ಪ ಅಮ್ಮಂದಿರೇ.... ನಿಮ್ಮ ಮಗುವಿನ ಜೀವನ ಆ ಶಿಕ್ಷಕರ ಕೈಯ್ಯಲ್ಲಿದೆ ಎಂಬುದನ್ನು ಮರೆಯಬೇಡಿ... ನಿಮ್ಮ ಮಗುವಿನ ಮೇಲಿನ ಮಮಕಾರ ಕ್ಕೆ ಶಿಕ್ಷಕನಿಗೆ ನೋವುಂಟುಮಾಡಿದರೆ.... ನಿಮಗೆ ಅಳಿಸಲಾಗದ ನೋವು ಕಟ್ಟಿಟ್ಟ ಬುತ್ತಿ...!!!! ಇಂದಿನ ಇಡೀ ಸಮಾಜದ ಮನುಷ್ಯರಲ್ಲಿ ಮಾನವೀಯತೆ, ಸತ್ಯ, ನ್ಯಾ ಯಪರತೆ, ಸಹಕಾರ, ಇದು ಸತ್ತೋಗಿರೊದಕ್ಕೆ ಖಂಡಿತವಾಗಿ ಶಿಕ್ಷಕ.ಮತ್ತು ಶಿಕ್ಷ ಣಾನೇ ಕಾರಣ...!!! ಎಲ್ಲೆಲ್ಲಿ ಶಿಕ್ಷಕನಿಗೆ ಬಿಗಿ ಮಾಡುತ್ತಾ ಬಂದರೋ.. ಎಲ್ಲೆಲ್ಲಿ ಶಿಕ್ಷಕ ನನ್ನು ಕಡೆಗ್ಣಿಸಿ ಇಡೀ ದೇಶದಲ್ಲಿ ಪ್ರಾಥಮಿಕ ಶಿಕ್ಷಕನನ್ನು ಮೂರನೇ ದರ್ಜೆಯ " ನೌ ಕರ" ಎಂದು ಪರಿಗಣಿಸಿದರೋ... ಅಲ್ಲಿಗೆ ಮುಗಿದು ಹೋಯ್ತು..... ಅವನಲ್ಲಿನ ಅಂ ತಃ ಸತ್ವಕ್ಕೇ ಕೊಡಲೀ ಪೆಟ್ಟು ಬಿದ್ದಮೇಲೇ ಅವನು ಎಲ್ಲವನ್ನೂ ನುಂಗಿ ನೀರ್ ಕುಡಿ ದುಬಿಟ್ಟ... ಶಿಕ್ಷ್ಣಣ ಎಲ್ಲಿಗೆ ಹೋಗಬೇಕಿತ್ತೋ ಅದರ ವಿರುದ್ಧ ದಿಕ್ಕಿಗೆ ತೆಕ್ಕೋಂಡು ಹೋಗಿ ನಿಲ್ಲಿಸಿದ..ಕಾಗದ ಕುದುರೆ ವ್ಯಾಪಾರಕ್ಕೆ ಇಳಿದುಬಿಟ್ಟ...ದಾಖಲೆ ಕೇಳುವೋ ರು ಕಂಡ್ರೂ...ಅವರೀಗೆ ಬೇಕಾದ್ ದಾಖಲೇ ಇಟ್ಟ... ಫಾಠ ಪ್ರವಚನ ಬಿಟ್ಟೇ ಬಿಟ್ಟ!!!."ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೇ " ಅಂತ ಬಾಯಲ್ಲಿ ಹೇಳೋದೂ ಅದೇ ಗಿಡಾನ ತಿದ್ದಿ ತೀಡಿ ಮಾಡುವ ಶಿಕ್ಷಕ ವರ್ಗಕ್ಕೆ ಕೊಡಬಾರದ ಹಿಮ್ಸೆ ಕೊಟ್ಟು ಗಿಡದ ಹತ್ರಾ ಎಲ್ಲು ಸುಳೀದಾಮ್ಗೇ ಮಾಡಿ ಆ ಗಿಡಗಳು ಬಗ್ಗಲೂ ಇಲ್ಲಾ ನೇರಾ ನಿಲ್ಲೋಕೆ ಗೊತ್ತೂ ಆಗಲ್ಲಾ ಹಾಗ್ ಮಾಡಿಸಿ ಇಡೀ ಸಮಾಜವನ್ನು ತ್ರಿಶಂಕು ಮಾಡಿ ಕೂರಿಸಿ ಇಂದು... ಮೊರಲ್ ಎಜ್ಯುಕೇಶನ್ ಬಗ್ಗೆ,,,, ಧೈರ್ಯ ತುಂಬೋದರ ಬಗ್ಗೆ... ಕಾನೂನು ಅರಿವಳಿಕೆಬಗ್ಗೆ... ಹೀಗೇ ಬೇರೆ ಬೇರೇದರ ಬಗ್ಗೆ ಬೇರೆ ಬೇರೇಯೋರ ಹತ್ರ ಶಿಬಿರಾ ಮಾಡೊ ಮಟ್ಟಕ್ ತಂದು ನಿಲ್ಲಿಸಿಬಿಟ್ರು... ಬೇಕಿತ್ತಾ ಇದೆಲ್ಲಾ...? ಅಯ್ಯೋ ಖರ್ಮವೇ.... ಇವರೀಗೆ ಮಕ್ಕಳ ಪುಸ್ತಕದಲ್ಲಿ ಕಿತ್ತೂರ್ ರಾಣಿ ಚೆನ್ನಮ್ಮನ್ ಪಾಠ ಅಂಬೇಡ್ಕರ್ ಪಾಠ ತೆಗೀ ಬಾರ್ದು..ಆದ್ರೆ ಮಕ್ಕಳೀಗೆ ಕಂಪ್ಯೂಟರ್ ನಾಲೇಜ್ ಬರಬೇಕೂ...ಅದೇಂಗ್ ಸಾಧ್ಯಾರೀ... ಅಂಬೇಡ್ಕರ್ ಪಾಠಕ್ಕೂ ಕಂಪ್ಯೂಟರಿಗೂ... ಪಾಪ ಆ ಪುಣ್ಯಾತ್ಮ ಸಾಯೋದ್ರೊಳಗೆ ಕಂಪ್ಯೂಟರ್ ಅನ್ನೋ ಪದಾನಾದ್ರೂ ಕೇಳಿ ದ್ನೋ ಇಲ್ವೋ..........ಇನ್ನೂ ಒಂದು ತಮಾಷೆ ಅಂದ್ರೆ...ಇ ಇತ್ತೀಚಿನ ಸಿನಿಮಾಗ ಳಲ್ಲಿ ಕಾಣೋಹಾಂಗೇ... ಒಂದು ಲವ್ವು... ಕಾಲೇಜ್ ಲೈಫ್, ಒಂದು ಹೊಡೆದಾಟ..೬ ಹಾಡು... ಕ್ಲೈಮ್ಯಾಕ್ಸಲ್ಲಿ ಒಂದು ಮದುವೆ.. ಹೀಗೇ ಪಟ್ಟಿ ಮಾಡಿಕೊಂಡು ರೀಲ್ ಬಿಚ್ಚಿ ದಾಂಗೇ ನಮ್ಮಪಟ್ಯಪುಸ್ತಕ ನೋಡಿ ಒಂದು ಅಂಬೇಡ್ಕರ್ ಪಾಠ, ಮೂರು ಹಾಡು ಅದ್ರಲ್ಲಿ ಒಂದು ದೇಶಭಕ್ತಿಗೀತೆ.( ಅವರೇ ಬರೆದಿರ್ತಾರೆ ಇದು ದೇಶಭಕ್ತಿ ಗೀತೆ ಅಂತ..!!) ಇನ್ನು ಬಸವಣ್ಣನ ಬಿಡೋಹಾಗಿಲ್ಲ...!! ಅಲ್ಲಾನ ಹೆಸರಿದ್ದಿದ್ದು ಒಮ್ದಾದ್ರೂ ಪಾಠ ಹಾಕದಿದ್ರೆ ಮುಸ್ಲೀಮರಿಗೆ ಬೇಜಾರಾಗತ್ತೆ... ಯಾವದಾದ್ರೂ ಒಮ್ದು ಪಾಠದಲ್ಲಿ ಮೇರಿ,ಥಾಮಸ್... ಅಬ್ದುಲ್ಲಾ... ಶಾಹಿದಾ ಬೇಗಂ ರವಿ ರಾಜು ಪುಟ್ಟಿ ಬರಲೇಬೇ ಕು...!! ಎರಡು ಕಥೆಗಳು... ಅದ್ರಲ್ಲಿ ಒಂದು ಎನಿಮೇಶನ್ ಪಿಚ್ಚರ್ ಥರದ್ದು.. ಇನ್ನೊಂದು ಯಾವುದೋ ದೇಶದ್ ಯಾವುದೋ ಭಾಷೆಯ ಅನುವಾದಿತ ಕಥೆ.. ಇನ್ನು ಕೊನೇ ಪಾಠ ಗೋವಿನ ಹಾಡು ಇರಬೇಕಿತ್ತು,,,ಅದರ ಬದಲು ಇತ್ತೀಚಿನ ಯಾರೋ ಕವಿಗಳು ಬರೆದ ಅರ್ಥ ಅವರಿಗೇ ಆಗದ ಒಂದು ಊಊದ್ದ ಪದ್ಯ...ಅಲ್ಲಿಗೆ ಪುಸ್ತಕ ಕ್ಲೋಸ್... ಇನ್ನೇನು ಕಡಿದು ಕಟ್ಟೆ ಹಾಕ್ಯಾರು ಮಕ್ಕಳು...? .......ಇನ್ನು ಇತಿಹಾಸ ಅಂತೂ ಕೇಳೋದೇ ಬ್ಯಾಡಾ..ಈವರ್ಷ ಆಳೋ ಪಕ್ಷದವರು ಯಾವದನ್ನು ನಮ್ಮ ಇತಿಹಾಸ ಅಂತ ಹೇಳಿ ಪಠ್ಯದಲ್ಲಿ ಹಾಕಿದ್ದರೋ ಮುಂದಿನ್ ವರ್ಷ ಬಂದ ಬೇರೆ ಸರಕಾರ ಅದು ಕಿತ್ತು ಬೇರೇನೇ ಇತಿಹಾಸ ಬರದು ನಂ ಕೈಗೆ ಕೊಟ್ಟು ಇದನ್ನೇ ಹೇಳಿ ಅಂತ ಹೇಳಿಸುತ್ತೆ.... ನಮಗೇ ಗೊಂದಲ ನಾವ್ ಓದಿದ್ ಇತಿಹಾಸ..!!! ಹಿಂದಿನ್ ಸರಕಾರ ಇದ್ದಾಗ ಕೊಟ್ಟ ಇತಿಹಾಸ...!!!!! ಈಗಿನ್ ಸರಕಾರದೋರು ಹೇಳೋ ಇತಿಹಾಸಾ...!!... ಯಾವ್ದೂ ಬ್ಯಾಡ ಅತ್ಲಾಗೆ ಸುಮ್ಮನೇ ಸೈನಾಕಿ ೩೦ ಕ್ಕೆ ಸಂಬ್ಳ ತಗಂಡು ಹೋಗೋಣಪ್ಪಾ ಅನ್ನಿಸಿಬಿಟ್ಟಿದೆ.. ಇನ್ನು ಈ ವಿಜ್ಞಾನದ ಕಥೆ ಕೇಳೋದೇ ಬ್ಯಾಡಾ... ಇದುವರೆಗೂ ನಾವು ನ್ಯೂಟ್ನನ್ ಅಣುಗ ಳನ್ನು ಕಂಡುಹಿಡಿದ.(ಕಂಡುಹಿಡಿಯೋಕೆ ಏನು ಅವು ತಪ್ಪಿಸಿಕೊಂಡು ಹೋಗಿದ್ವೇ..? ಇರಲೀ). ಏನೋ ಎಂತೋ ಹೇಳಿ ಪಾಠ ಮಾಡಿದ್ದಾಯ್ತು..ಈಗ ನಮಗೆ ಅಲ್ಲ್ಲಲ್ಲಾ. .ಅವನಿಗಿಂತಾ ನೂರಾರು ವರ್ಷ ಮೊದಲೇ ಬದುಕಿದ್ದ ನಮ್ಮ ದೇಶದವನೇ ಆದ ಕಣಾದ ಈ ಅಣುಗಳ ಇರುವಿಕೆಯನ್ನು ಪತ್ತೆ ಮಾಡಿದ ಎಂದು ಪಾಠ ಮಾಡಿ ಅಂದ್ರು... ಅಯ್ಯೋ ರಾಮಾ... ಕಣಾದ ಅನ್ನೋನು ಈ ದೇಶದಲ್ಲಿ ಇದ್ದೋನು ಅವನು ಅಣು ಶಾಸ್ತ್ರವನ್ನು ಬರೆದ ಅನ್ನೋದು ಈಗ ಗೊತ್ತಾಯ್ತಾ,,,? ಹಾಗಾದ್ರೆ ಸರ್ ಎಂ.ವಿ. ಸರ್ ಸಿವಿ.ರಾಮನ್ ಎಲ್ಲಾ ಇದನ್ನು ಓದೇ ಇಲ್ವಾ..ಆದ್ರೂ ಅವರೀಗೆ ವಿಜ್ಞಾನಿ ಪಟ್ಟ ಸಿಕ್ ಬುಡ್ತಾ..?ಥೂ...ಏನ್ ಬೇಕಾದ್ರೂ ಆಗೋಗ್ಲಿ...ಅಂದ್ಕೊಂಡ್ರೆ...... ಈ ಜೀವಶಾಸ್ತ್ರ ಅನ್ನೋ ಕಥೆ....!! ಕೇಳಿದ್ರೆ...ಅಯ್ಯಯ್ಯ...ಅದೇನೋಪ್ಪಾ..ನಾವೂ ಓದಿದ್ವೀ ಪಾಠಾನೂ ಮಾಡಿದ್ವೀ... ಇದೂವರ್ಗೂ... ಹಾಲು ಮೊಸರು ಬೆಣ್ಣೆ ತುಪ್ಪ ಇವೆಲ್ಲಾ ಶಕ್ತಿ ವರ್ಧಕ ಆಹಾರಗಳು ...ಇದನ್ನು ಬೆಳೆಯುವ ಮಕ್ಕಳು ತಿನ್ನಬೇಕು... ಎಂದು...ಈಗ್ ನೋಡಿದ್ರೆ ಅದು ಹಾಗಲ್ವಂತೆ... ಅವನ್ನು ತಿಂದ್ರೆ ಬೊಜ್ ಬರು ತ್ತಂತೆ.... ಮಕ್ಕಳಿಗೆ ಆ ಪಾಠ ತಿರುಗಿಸಿ ಹೇಳಬೇಕು...!!! ಎಂಥಾ ಗ್ರಾಚಾರನಪ್ಪಾ... ನಿದ್ದ್ರೆ ಮಾಡುತ್ತಿದ್ದವರನ್ನು ಎಬ್ಬಿಸಬಹುದು,,ಆದರೆ ನಿದ್ದೆಯನ್ನು ನಟಿಸುವವನನ್ನು ಎಬ್ಬಿಸಲಾದೀತೇ...?

Thursday 5 July 2012

ಭಾರತ ತನ್ನೊಳಗೆ ಹುದುಗಿಸಿಕೊಂಡ ಬೆಂಕಿಯ ಚೆಂಡುಗಳು



• ಜಗತ್ತಿನಏಳನೇಅತಿದೊಡ್ಡರಾಷ್ಟ್ರಭಾರತ, ಉತ್ತರದಿಂದದಕ್ಷಿಣಕ್ಕೆ 3214ಕಿ.ಮೀ., ಪೂರ್ವದಿಂದಪಶ್ಚಿಮಕ್ಕೆ 2933ಕಿ.ಮೀಉದ್ದ-ಅಗಲಹೊಂದಿದೆ. ಒಟ್ಟುಕರಾವಳಿತೀರ 7516ಕಿ.ಮೀ. ಭಾರತದಒಟ್ಟುವಿಸ್ತೀರ್ಣ- 32,87,263ಕಿ.ಮೀ

• ಅತಿಹೆಚ್ಚಿನರಾಷ್ಟ್ರಗಳೊಂದಿಗೆ 15,106ಕಿ.ಮೀಯಷ್ಟುಬೃಹತ್ವ್ಯಾಪ್ತಿಯಅಂತರಾಷ್ಟ್ರೀಯಗಡಿಗಳನ್ನುಹಂಚಿಕೊಂಡಿರುವರಾಷ್ಟ್ರಭಾರತ. 7 ದೇಶಗಳಜತೆಗೆಭಾರತಅಂತರಾಷ್ಟ್ರೀಯಗಡಿಗಳನ್ನುಹಂಚಿಕೊಂಡಿದೆ.

• 16.4.1853ರಂದುಮುಂಬೈನಿಂದಪ್ರಾರಂಭಗೊಂಡಈಸಂಸ್ಥೆಯ, ಅತ್ಯಂತಹೆಚ್ಚಿನ 1.56ಮಿಲಿಯನ್ಉದ್ಯೋಗಿಗಳನ್ನುಹೊಂದಿರುವವಿಶ್ವದಅತಿದೊಡ್ಡಸಂಸ್ಥೆ- ಭಾರತೀಯರೈಲ್ವೇ

• ಪ್ರಾಚೀನಭಾರತದಲ್ಲಿದ್ದಖ್ಯಾತಹಾಗೂವಿಶ್ವದಮೊದಲವಿಶ್ವವಿದ್ಯಾಲಯ- ತಕ್ಷಶಿಲಾ

• ಮಾರ್ಚ್ 2003ರಗಣತಿಯಪ್ರಕಾರ, 55,78೦ಪತ್ರಿಕೆಗಳುಮತ್ತುನಿಯತಕಾಲಿಕೆಗಳುಭಾರತದಲ್ಲಿಪ್ರಕಾಶಿತವಾಗುತ್ತವೆ. ಈಪೈಕಿಇಡೀಭಾರತದಲ್ಲೇಅತಿಹೆಚ್ಚುಪ್ರಸಾರವುಳ್ಳದಿನಪತ್ರಿಕೆ- ದೈನಿಕ್ಜಾಗರಣ್

• ವಿಶ್ವಪ್ರಸಿದ್ಧಭಾರತೀಯಚಿತ್ರನಿರ್ದೇಶಕ, ಮರೆಯಲಾರದಚಿತ್ರಗಳಾದಪಥೇರ್ಪಾಂಚಾಲಿ,ಅಪರಾಜಿತೊ, ಅಪುರ್ಸಂಸಾರ್, ಚಾರುಲತಾ, ಘರೇಬೈರೇಚಿತ್ರಗಳುಇವರಕೊಡುಗೆ. 1992 ನಿಧನರಾದಈಮಹಾನ್ಕಲಾವಿದ -ಸತ್ಯಜಿತ್ರೇ

• ಚಂದ್ರನತ್ತಉಪಗ್ರಹಕಳುಹಿಸಿ 6ನೇ ದೇಶಭಾರತ. ಈ ಯೋಜನೆಯಹೆಸರುಚಂದ್ರಯಾನ. ಈಯೋಜನೆಯಮೂಲಹೆಸರು – ಸೋಮಯಾನ

• ಪೈಥಾಗೋರಸ್ಪ್ರಮೇಯವನ್ನುಮೊದಲೇಕಂಡುಕೊಂಡಿದ್ದಪ್ರಾಚೀನಭಾರತದರೇಖಾಗಣಿತಜ್ಞ- ಬೋಧಾಯನ

• ಕೃತಕಜೀನ್ಆವಿಷ್ಕಾರಕ್ಕಾಗಿನೊಬೆಲ್ಪುರಸ್ಕೃತಭಾರತೀಯವಿಜ್ಞಾನಿ- ಡಾ| ಹರ್ಗೋಬಿಂದ್ಖುರಾನಾ

• ಪ್ಲಾಸ್ಟಿಕ್ಸರ್ಜರಿ ಕುರಿತು ಸಮರ್ಪಕ ಮಾಹಿತಿ ತಿಳಿದಿದ್ದ ಪ್ರಾಚೀನಭಾರತದ ಶ್ರೇಷ್ಠ ಶಸ್ತ್ರಚಿಕಿತ್ಸಕ- ಸುಶ್ರುತ

• ’ಪರಮ್-1೦,೦೦೦’ ಈಸೂಪರ್ಕಂಪ್ಯೂಟರ್ನಿರ್ಮಾತೃ ಡಾ| ವಿಜಯ್ಭಾಟ್ಕರ್

ಜಗತ್ತಿನ 7 ನೇಅತಿದೊಡ್ಡದೇಶ, 4ನೇದೊಡ್ಡಸೈನ್ಯ, 3ನೇದೊಡ್ಡರೈಲ್ವೆ, 2ನೇಹೆಚ್ಚುಜನಸಂಖ್ಯೆಯದೇಶ, 2ನೇಅತಿವೇಗವಾಗಿಬೆಳೆಯುತ್ತಿರುವಆರ್ಥಿಕಶಕ್ತಿ, 2ನೇಅತಿದೊಡ್ಡಅಕ್ಕಿಮತ್ತುಚಹಾಉತ್ಪಾದಕ, ಕಾಗೆಬಂಗಾರ (ಮೈಕಾ) ಮತ್ತುಹಾಲುಉತ್ಪಾದನೆಯಲ್ಲಿಜಗತ್ತಿನಲ್ಲಿನಂ.1, ಜಗತ್ತಿನಅತಿದೊಡ್ಡಪ್ರಜಾಪ್ರಭುತ್ವದೇಶ, ಜಗತ್ತಿನಅತಿದೊಡ್ಡಕಾರ್ಮಿಕಶಕ್ತಿ, 2020 ರಲ್ಲಿವಿಶ್ವಶಕ್ತಿಯಸಾಮರ್ಥ್ಯದದೇಶ. ಏಕೆ ?ಹೇಗೆ ?




ಭಾರತಹೇಗಿತ್ತು ?

1೦,೦೦೦ವರ್ಷಗಳಕಾಲಭಾರತವಿಶ್ವದಗೌರವಆಕರ್ಷಣೆಗಳಕೇಂದ್ರವಾಗಿತ್ತು.ಬ್ರಿಟಿಷರುಕಾಲಿಡುವತನಕಜಗತ್ತಿನಅತಿಶ್ರೀಮಂತದೇಶವಾಗಿತ್ತು. 7೦೦ಕ್ರಿ.ಪೂ. ಮೊದಲವಿಶ್ವವಿದ್ಯಾಲಯತಕ್ಷಶಿಲಾ – ಜಗತ್ತಿನ 1೦,5೦೦ವಿದ್ಯಾರ್ಥಿಗಳು, 6೦ವಿಷಯಗಳಲ್ಲಿಅಧ್ಯಯನ.ತಮಿಳುನಾಡಿನತಂಜಾವೂರಿನಬೃಹದೇಶ್ವರಜಗತ್ತಿನಮೊದಲಗ್ರಾನೈಟ್ದೇವಸ್ಥಾನ, 8೦ಟನ್ತೂಕದಏಕಶಿಲೆಯಿಂದಮಾಡಿದ್ದು.೦ಕಂಡುಹಿಡಿದವನುಆರ್ಯಭಟ.235೦ಕ್ರಿ.ಪೂ.ಶಾಲಿಹೋತ್ರಪಶುವೈದ್ಯಶಾಸ್ತ್ರದಪಿತಾಮಹ.

ಮುಂಬೈಡಬ್ಬಾವಾಲಾಗಳು

188೦ರಲ್ಲಿಆರಂಭವಾದಮುಂಬೈಯಲ್ಲಿಊಟದಬುತ್ತಿಪೂರೈಸುವಡಬ್ಬಾವಾಲಾಗಳಕೆಲಸಅದೀಗಮ್ಯಾನೇಜ್ಮೆಂಟ್ಜಗತ್ತಿನಲ್ಲಿಕುತೂಹಲಮೂಡಿಸಿದೆ. 5,೦೦೦ಡಬ್ಬಾವಾಲಾಗಳದಿನಕ್ಕೆ 4,೦೦,೦೦೦ಡಬ್ಬಿಗಳಂತೆಅವರಿಗೆಬೇಕಾದಊಟವನ್ನೇ 3 ಗಂಟೆಗಳಒಳಗಾಗಿತಲುಪಿಸುವ 99.9999ರಷ್ಟುನಿಖರವಾಗಿತಲುಪಿಸುವವ್ಯವಸ್ಥೆಯುಕಂಪ್ಯೂಟರ್ನನಿಖರತೆಯನ್ನೂಮೀರಿದೆ. ಸಿಕ್ಸ್ಸಿಗ್ಮಾಅಲಂಕೃತರು – ಹೆಚ್ಚಿನವರುಅನಕ್ಷರಸ್ತರು – ಆದರೆಎಂ.ಬಿ.ಎ. ವಿದ್ಯಾರ್ಥಿಗಳಿಗೆಪಾಠಮಾಡುವಂತಿದ್ದಾರೆ.ಇನ್ನೊಂದುವಿಶೇಷವೆಂದರೆಡಬ್ಬಾವಾಲಾಗಳು 116 ವರ್ಷಗಳಇತಿಹಾಸದಲ್ಲಿಒಮ್ಮೆಯೂನಿರಶನಅಥವಾಮುಷ್ಕರಹೂಡಿಲ್ಲ. 5೦ಕೋಟಿರೂ.ಗಳಈವ್ಯವಹಾರದಲ್ಲಿಪ್ರತಿಯೊಬ್ಬಡಬ್ಬಾವಾಲಾನೂಸಹಪಾಲುದಾರನೇ. ಈಸಂಸ್ಥೆಗೆಐಎಸ್ಒ 2೦೦೦ಮಾನ್ಯತೆದೊರೆತಿದೆ.ಸರಾಸರಿ 8ನೇತರಗತಿಓದಿರುವಡಬ್ಬಾವಾಲಾಗಳಉಪಜೀವನವುಇದೀಗಎಮ್ಬಿಎವಿದ್ಯಾರ್ಥಿಗಳಿಗೆಇಂದುಮಾದರಿಯಾಗಿದೆ.

ವೈಜ್ಞಾನಿಕಸಾಧನೆಗಳು

ಇಸ್ರೋ-ಎತ್ತಿನಗಾಡಿಯಿಂದಜಿ.ಎಸ್.ಎಲ್.ವಿ.ವರೆಗೆಸಾಧನೆಗಳವಿಕ್ರಮ.ಅಮೇರಿಕದಅಂತರಿಕ್ಷಬಜೆಟ್ 16 ಬಿಲಿಯನ್(8,೦೦೦ಕೋಟಿರೂ.) ಡಾಲರ್ಆದರೆಇಸ್ರೋದ್ದು – 7೦೦ಮಿಲಿಯನ್ಡಾಲರ್(35೦ಕೋಟಿರೂ.)ಮಾತ್ರ.

ಭಾರತದಹೆಮ್ಮೆಯಚಂದ್ರಯಾನಉಡಾವಣೆಯಶಸ್ವಿಯಾದಾಗ ‘ಕತಾರ್ಟ್ರಿಬ್ಯೂನ್’ ಪತ್ರಿಕೆಯಲ್ಲಿ ‘ಅಲ್ವತನ್’ ಪತ್ರಿಕಾಬಳಗದಮುಖ್ಯಸ್ಥಅಹಮದ್ಅಲಿಬರೆಯುತ್ತಾರೆ – “ನಾವುಅರಬರುಇನ್ನೂಆಲೂಗಡ್ಡೆಚಿಪ್ಸ್ಮಾಡುವದರಲ್ಲಿದ್ದೇವೆ. ಭಾರತದವರುಚಂದ್ರನಿಗೆಲಗ್ಗೆಇಟ್ಟಿದ್ದಾರೆ.ನಾವುಭಾರತದಡ್ರೈವರ್ಆಗಿರಲಿ, ಸಾಮಾನ್ಯಕಾರ್ಮಿಕನೇಆಗಿರಲಿಅವನನ್ನುಗೌರವದಿಂದಕಾಣಲೇಬೇಕು, ಏಕೆಂದರೆಅದಕ್ಕೆಅವರುಯೋಗ್ಯರು.ನಾವಾದರೋಪರಸ್ಪರಕುತಂತ್ರಹೂಡುವದರಲ್ಲಿ, ಕಿತ್ತಾಡುವುದರಲ್ಲಿ, ಒಡಕುಮೂಡಿಸುವುದರಲ್ಲಿ.ನಾವುಕೇವಲಕವನಗಳನ್ನುಬರೆಯುತ್ತಾ, ವಿಲಾಸಮಾಡುತ್ತಾಇರಬಲ್ಲೆವು.ಈಗನಾವುಮಾಡಬಹುದಾದಕೆಲಸವೆಂದರೆಚಂದ್ರನಬಗ್ಗೆಹಾಡುವುದು, ನಮ್ಮದುಸ್ಥಿತಿಯಬಗ್ಗೆಅಳುತ್ತಾಕೂರುವುದು”!

ಪೇಪರ್ನಷ್ಟುತೆಳುವಾಗಿರುವನ್ಯಾನೋಪೇಪರ್ನಿಂದಬ್ಯಾಟರಿಸೆಲ್ತಯಾರಿಸಿದವರುಅಲ್ಟ್ರಾಥಿನ್ಬ್ಯಾಟರೀಸ್ಸೆಲ್ಲುಲೋಸ್ಅನ್ನುಬಳಸಿ.ಅಮೇರಿಕದಮೂರುವಿ.ವಿ.ಗಳಲ್ಲಿಸಂಶೋಧನೆಮಾಡುತ್ತಿರುವಭಾರತೀಯವಿಜ್ಞಾನಿಗಳು – ಅಜೇಯನ್, ನಲ್ಲಮಾಸು, ಮುರುಗೇಶನ್, ಮಣಿಕೋಟ್, ಪುಷ್ಪರಾಜ್, ಕುಮಾರ್.

ಭಾರತದಆರ್ಶಿವರಾಮನ್(34) ಚೆನ್ನೈ, ಕಂಪ್ಯೂಟರ್ಹಾರ್ಡ್ಡ್ರೈವ್ನಲ್ಲಿ೫೦೦ಜಿ.ಬಿ.ಅಷ್ಟುಸ್ಥಳಾವಕಾಶದಲ್ಲಿ, 3೦ಟೆರ್ರಾಬೈಟ್ಕೂರಿಸುವಲ್ಲಿಯಶಸ್ವಿಯಾಗಿದ್ದಾನೆ. ನ್ಯಾನೋಕಣಗಳಆಧಾರಿತವಾಗಿನೀರಿನಸೋಸುವಿಕೆಯಂತ್ರವನ್ನುಮೊದಲಬಾರಿಗೆಐಐಟಿಚೆನ್ನೈನಲ್ಲಿಸಿದ್ಧಪಡಿಸಲಾಗಿದೆ.ಇದನ್ನುನ್ಯಾನೋಟೆಕ್ನಾಲಜಿಎಂದರೆ, ಅಣುಪರಮಾಣುಮಟ್ಟದಲ್ಲಿಕಣಗಳನಿಯಂತ್ರಣಮತ್ತುಬಳಕೆಎಂದರ್ಥ. ಇದರಲ್ಲಿಭಾರತಏನೂಹಿಂದುಳಿದಿರಲಿಲ್ಲ. 3,೦೦೦ವರ್ಷಗಳಹಿಂದೆಯೇಭಾರತದಖ್ಯಾತಉಕ್ಕು ‘ವೂಟ್ಸ್’ ನಲ್ಲಿಮತ್ತುಅಜಂತಾವರ್ಣಚಿತ್ರಗಳಲ್ಲಿಸಹಈತಂತ್ರಜ್ಞಾನದಬಳಕೆಆಗಿದೆ. ಇಷ್ಟೆಲ್ಲಾಸಾಧನೆಗಳುಇದ್ದರೂಸಹ, ಭಾರತವುಈಸಂಶೋಧನೆಗಳಿಗೆನೀಡುತ್ತಿರುವಹಣ 1,೦೦೦ಕೋಟಿರೂಪಾಯಿ,

ವಾಣಿಜ್ಯಚಿಂತಕರಲ್ಲಿಈಜಾಗತಿಕವಾಗಿಮೊದಲಸ್ಥಾನದಲ್ಲಿರುವವರುಕೊಯಮತ್ತೂರುಕೃಷ್ಣಪ್ರಹಲ್ಲಾದ್.ಸಿಕೆಪಿಎಂದೇಖ್ಯಾತರಾದಇವರ ‘ಬಾಟಮ್ಆಫ್ದಪಿರಾಮಿಡ್’ ಇತ್ತೀಚಿನಜನಪ್ರಿಯಪುಸ್ತಕ.ಇವರಲ್ಲದೇವಿಜಯಗೋವಿಂದರಾಜನ್, ರಾಮ್ಚರಣ್, ರಾಕೇಶ್ಖುರಾನಾಇವರುಜಗತ್ತಿನಮೊದಲ 50 ವಾಣಿಜ್ಯವ್ಯವಹಾರಚಿಂತಕರಪಟ್ಟಿಯಲ್ಲಿದ್ದಾರೆ.

ಭಾರತಕ್ಕೆಭಾರತವೇಹೋಲಿಕೆ

‘ಟ್ಯಾಲಿ’ ಸಾಫ್ಟ್ವೇರ್ನ್ನುಸಿದ್ಧಪಡಿಸಿದಭರತ್ಗೋಯೆಂಕಾತಮ್ಮಹಿರಿಯರಿಂದಬಂದವಾಣಿಜ್ಯವ್ಯವಹಾರಗಳತಂತ್ರವನ್ನುತಂದೆಯವರಿಂದಕಲಿತರು.ಹಿರಿಯರಲೆಕ್ಕಾಚಾರಪದ್ಧತಿಗೆಒಂದುಕಂಪ್ಯೂಟರ್ಆಯಾಮನೀಡಿದರು.ಇಂದು ‘ಟ್ಯಾಲಿ’ ಸಾಫ್ಟ್ವೇರ್ತೃತೀಯಜಗತ್ತಿನಅತಿಬೇಡಿಕೆಯವಾಣಿಜ್ಯಸಾಫ್ಟ್ವೇರ್, ಮಾತ್ರವಲ್ಲತನ್ನ 3೦% ಮಾರುಕಟ್ಟೆಯನ್ನುಅದುಹಿಡಿದಿಟ್ಟಿದೆ.‘ಟ್ಯಾಲಿ’ ಇ.ಆರ್.ಪಿ.9 ಎಂಬಹೊಸಆವೃತ್ತಿಯುಯಾವುದೇವ್ಯಾಪಾರಿಗೆತಾನುಕುಳಿತಸ್ಥಳದಿಂದಲೇತನ್ನವ್ಯವಹಾರವನ್ನುಎಲ್ಲಾರೀತಿಯಿಂದನಿರ್ವಹಿಸಬಹುದಾಗಿದೆ.ಅದಕ್ಕೆಡೈಯಲ್ಉಪ್ಕನೆಕ್ಶನ್ಇದ್ದರೂಸಾಕು.ಮುನಿಸಿಪಾಲಿಟಿಗಳಿಗೆಬೇಕಾದವಾಣಿಜ್ಯಸಾಫ್ಟ್ವೇರ್ ‘ಟ್ಯಾಲಿಅಸೆಂಟ್ಫಾರ್ಗವರ್ನೆನ್ಸ್’ ಅನ್ನುಭರತ್ಅವರತಂಡಹೊರತಂದಿದೆ.

ಕಬ್ಬಿಣದತುಕ್ಕಿನಿಂದಚಿನ್ನ

ತುಕ್ಕುಹಿಡಿದಕಬ್ಬಿಣಉಕ್ಕಿನಕಂಪನಿಗಳನ್ನುಖರೀದಿಸಿಅವುಗಳಮೂಲಕಚಿನ್ನತೆಗೆದಭಾರತದಒಬ್ಬಸಾಮಾನ್ಯವ್ಯಾಪಾರಿಇಂದುವಿಶ್ವದಉಕ್ಕಿನಕೋಟೆಯಒಡೆಯ. ಅವರೇಲಕ್ಷ್ಮೀಮಿತ್ತಲ್. 12 ಬೃಹತ್ಪ್ರಮಾಣದಪ್ಲಾಂಟ್ಗಳಒಡೆಯನಾಗಿರುವಈತನಗೆಲುವಿನಯಾತ್ರೆಆರಂಭವಾದದ್ದುಇಂಡೋನೇಶಿಯಾದೇಶದಇಸ್ಪಾಟ್ಕಂಪನಿಯನ್ನುಕೊಳ್ಳುವುದರಮೂಲಕ.ಆರ್ಥಿಕಕುಸಿತದಿಂದಉಕ್ಕಿನವ್ಯಾಪಾರಬಸವಳಿದಿದ್ದಾಗಮಿತ್ತಲ್ಕಂಪನಿಭರ್ಜರಿಲಾಭಗಳಿಸಿತ್ತು.ಈತನಸಾಮ್ರಾಜ್ಯಹರಡಿರುವುದುಕೆನಡಾದಿಂದಟ್ರಿನಿಡಾಡ್ವರೆಗೆ, ಟೊಬ್ಯಾಗೊದಿಂದಕಝಕಿಸ್ಥಾನದವರೆಗೆ.ಇನ್ನೊಂದುದೈತ್ಯಕಂಪನಿಅರ್ಸೆಲಾರ್ಅನ್ನುಕೊಂಡಿದ್ದುಕೆಲವೇನಿಮಿಷಗಳಮಾತುಕತೆಯಮೂಲಕ.“ತಮ್ಮಕೆಲವೇಮಾತುಗಳಲ್ಲಿನಡವಳಿಕೆಯಿಂದಮಿತ್ತಲ್ನಮ್ಮಹೃದಯವನ್ನುಗೆದ್ದರು” ಎಂದಿದ್ದರುಅರ್ಸೆಲಾರ್ಕಂಪನಿಯಮೊದಲಿನಡೈರೆಕ್ಟರ್ಗಳು.

ಪಾಕಿಸ್ಥಾನೀಯರಅಸೂಯೆ

ಅಂಬಾನಿಸೋದರರುಇಬ್ಬರಹಣಸೇರಿಸಿದರೆಇಡೀಕರಾಚಿಯಸ್ಟಾಕ್ಎಕ್ಸ್ಚೇಂಜಿನಲ್ಲಿರುವಎಲ್ಲಾಕಂಪನಿಗಳನ್ನುಖರೀದಿಸಿ, ಇನ್ನೂ 15,೦೦೦ಕೋಟಿರೂ.ಉಳಿಯುತ್ತದೆಎಂದುಗೋಳುಹೊಯ್ದುಕೊಳ್ಳುವವರು – ಪಾಕಿಸ್ಥಾನದಹಿರಿಯಪತ್ರಕರ್ತಡಾ.ಫಾರೂಖ್ಸಲೀಮ್.ಮುಂದುವರೆದುಹೀಗೆಬರೆಯುತ್ತಾರೆ.

• ಪಾಕಿಸ್ಥಾನದವರ್ಷದಎಲ್ಲಉತ್ಪಾದನೆಗಳನ್ನುಕೊಂಡು, 3೦,೦೦೦ಕೋಟಿರೂ. ಉಳಿಸುವಸಾಮರ್ಥ್ಯಭಾರತದಮೊದಲಾನಾಲ್ಕುಶ್ರೀಮಂತರಿಗಿದೆ. ಆನಾಲ್ವರುಚೈನಾದಮೊದಲನಲ್ವತ್ತುಶ್ರೀಮಂತರನ್ನುಕೊಳ್ಳಬಲ್ಲರು.

• ವಿಶ್ವಸಂಸ್ಥೆಯುತನ್ನ 192 ಸದಸ್ಯರಾಷ್ಟ್ರಗಳಲ್ಲಿಅಫಘಾನಿಸ್ಥಾನದಚುನಾವಣೆಗೆಸಹಾಯಕೇಳಿದ್ದುಭಾರತದಚುನಾವಣಾಕಮಿಷನ್ಅನ್ನು. ಅಫಘಾನಿಸ್ಥಾನದರಾಜಧಾನಿಕಾಬುಲ್ಪಾಕಿಸ್ಥಾನಕ್ಕೆಹತ್ತಿರವಾಗಿದೆಯಲ್ಲವೇ? ಪಾಕಿಸ್ಥಾನಕ್ಕೆಏಕೆಕೇಳಲಿಲ್ಲ?

• ಈಭೂಮಿಯಮೇಲೆಅತ್ಯಂತಶ್ರೀಮಂತಮುಸ್ಲಿಂಆಗಿರುವಅಜಿಮ್ಪ್ರೇಮ್ಜೀವಾಸಿಸುತ್ತಿರುವುದುಭಾರತದಲ್ಲಿ, ಅದೂಬೆಂಗಳೂರಿನಲ್ಲಿ.

• ಭಾರತದಲ್ಲಿ 3 ಡಜನ್ಬಿಲಿಯಾಧಿಪತಿಗಳಿದ್ದರೆ, ಪಾಕಿಸ್ಥಾನದಲ್ಲಿಒಬ್ಬನೇಒಬ್ಬಡಾಲರ್ಬಿಲಿಯಾಧಿಪತಿಇಲ್ಲ.

• ಭಾರತದಉದ್ಯಮಪತಿತನ್ನಹೆಂಡತಿಗೆಒಂದುಹುಟ್ಟುಹಬ್ಬಕ್ಕೆಕೊಟ್ಟಕಾಣಿಕೆಯಮೊತ್ತಕೇವಲ 3೦ಕೋಟಿರೂ.

• ಒಂದೇಪೂರ್ವಜರನ್ನು, ಒಂದೇಡಿ.ಎನ್.ಎ. ಹೊಂದಿರುವಮತ್ತುಒಂದೇರೀತಿಯಸಿನೆಮಾನೋಡುವಸಂಗೀತಕೇಳುವನಾವುಪಾಕಿಸ್ಥಾನಿಯರಲ್ಲಿಏನಿಲ್ಲ?

ಭಾರತೀಯರಲ್ಲಿಏನಿದೆ? - ಅವರುನಿರ್ಮಾಣದಬಗ್ಗೆಯೋಚಿಸಿದರೆ, ನಾವುನಿರ್ನಾಮದವಿನಾಶದಬಗ್ಗೆಯೋಚಿಸುತ್ತೇವೆ.ನಮ್ಮತಲೆಯಲ್ಲಿರುವಹುಳಒಂದೇಮತ,ಮತ,ಮತ. ಭಾರತೀಯರುಎಲ್ಲದರಬಗ್ಗೆಯೋಚಿಸುತ್ತಾರೆ.

ದೊಡ್ಡಣ್ಣನಮನೆಯಲ್ಲಿಭಾರತ

ಕಳೆದಡಿಸೆಂಬರ್ನಲ್ಲಿವಾಷಿಂಗ್ಟನ್ನಲ್ಲಿಅಮೇರಿಕದಅಧ್ಯಕ್ಷಒಬಾಮಾಮತ್ತುಭಾರತದಪ್ರಧಾನಿಮನಮೋಹನ್ಸಿಂಗರಮುಖಾಮುಖಿಮಾತುಕತೆನಡೆಯಿತು.ಸಿಂಗ್ರಪಕ್ಕದಲ್ಲಿಮಾತುಕತೆಗಳನ್ನುಗುರುತುಹಾಕಿಕೊಳ್ಳಲುಕುಳಿತವರುಅವರಆಪ್ತಕಾರ್ಯದರ್ಶಿಜೈದೀಪ್ಸರ್ಕಾರ್ಭಾರತದವಿದೇಶಾಂಗಖಾತೆಯಲ್ಲಿರುವನವಯುವಕ.ಒಬಾಮಾಪಕ್ಕದಲ್ಲಿಅಮೇರಿಕದಪರವಾಗಿಕುಳಿತವರುಅನಿವಾಸೀಭಾರತೀಯಅನಿಶ್ಗೋಯೆಲ್, ಅಮೇರಿಕದವಿದೇಶಾಂಗವ್ಯವಹಾರಗಳಲ್ಲಿಉದಯಿಸುತ್ತಿರುವನಕ್ಷತ್ರ. ಅದೇರೀತಿನಡೆದಅಫ್ಗನ್-ಪಾಕ್ಕುರಿತಮಾತುಕತೆಗಳಲ್ಲಿಅಮೇರಿಕದಪ್ರಮುಖರೊಂದಿಗೆಪಾಕ್-ಅಫ್ಘನ್ಗಳಅಮೆರಿಕದವಿಶೇಷಪ್ರತಿನಿಧಿಯಾಗಿದ್ದವರುವಿಕ್ರಮ್ಸಿಂಗ್.

ಇದುಅಮೇರಿಕದಲ್ಲಿಹೆಚ್ಚುತ್ತಿರುವಭಾರತೀಯರಪ್ರಭಾವವನ್ನುತೋರಿಸುತ್ತದೆ.ಅಲ್ಲಿನಭಾರತೀಯರನಿಷ್ಠೆ-ನಿಯತ್ತು, ಪ್ರತಿಭೆ, ಕಠಿಣಪರಿಶ್ರಮಗುರುತಿಸಿಅದಕ್ಕೆನೀಡಿರುವಗೌರವವಷ್ಟೆ.ಇದಕ್ಕಿಂತಹೆಚ್ಚಿನದನ್ನುಕಲ್ಪಿಸಿಕೊಳ್ಳುವುದುಎರಡೂದೇಶಗಳಿಗೆನಷ್ಟಕಾರಿ.

ಒಬಾಮಾಗೆಸಹಾಯಕರಾಗಿಆಯಕಟ್ಟಿನಸ್ಥಾನಗಳಲ್ಲಿಕೆಲಸಮಾಡುತ್ತಿರುವಭಾರತೀಯಮೂಲದವರಸಂಖ್ಯೆ – 26.ಒಬಾಮಾಜೊತೆಗೆ 17 ಜನಪ್ರಮುಖಸ್ಥಾನಗಳಲ್ಲಿಕೆಲಸಮಾಡುತ್ತಿದ್ದಾರೆ.ಇದುಪಾಕಿಸ್ಥಾನಕ್ಕೆಹೊಟ್ಟೆಕಿಚ್ಚಿಗೆಸಿಲುಕಿಸಿದೆ.ಅಮೇರಿಕದಲ್ಲಿ 25ಲಕ್ಷಭಾರತೀಯರಿದ್ದು, 32 ಲಕ್ಷಚೈನೀಯರಿದ್ದಾರೆ. ಮನೆಯಲ್ಲಿಬೆಳೆದವಾತಾವರಣದಿಂದಾಗಿಮತ್ತುಒಳ್ಳೆಯಇಂಗ್ಲಿಷ್ಮಾತನಾಡುವಕಾರಣದಿಂದಭಾರತೀಯರುಅಮೆರಿಕನ್ರನೆಚ್ಚಿನಆಯ್ಕೆಆಗಿದ್ದಾರೆ.ಇತ್ತೀಚಿಗೆಪಾಕಿಸ್ಥಾನಕ್ಕೆನೆರವುನೀಡುವಾಗಯುಎಸ್ಏಯಿಡ್ಪ್ರಮುಖರಾಗಿರಾಜೀವ್ಶಾಹಇದ್ದದ್ದುಪಾಕ್ನವರಹೊಟ್ಟೆಕಿಚ್ಚಿಗೆಕಾರಣವಾಗಿತ್ತು.

ಏನಿದುತಿರುಗು-ಮುರುಗು?

• ಜಗತ್ತಿನಲ್ಲಿಅತಿಹೆಚ್ಚುಹೃದ್ರೋಗಿಗಳನ್ನು, ಸಕ್ಕರೆಖಾಯಿಲೆಯುಳ್ಳವರದೇಶಭಾರತ. ಆದರೆಜಗತ್ತಿಗೆಯೋಗ, ಪ್ರಾಣಯಾಮ, ಆಯುರ್ವೇದಗಳನ್ನುನೀಡಿದದೇಶಭಾರತ.

• ‘ಜಗತ್ತೇಒಂದುಕುಟುಂಬ’ ಎಂದಿದ್ದುಭಾರತ. ಆದರೆಅತಿವೇಗದಲ್ಲಿಕುಟುಂಬಗಳುಒಡೆಯುತ್ತಿರುವುದುಮತ್ತುದಂಪತಿಗಳವಿಚ್ಛೇದನಗಳುಹೆಚ್ಚುತ್ತಿರುವುದುಭಾರತದನಗರಗಳಲ್ಲಿ.

• ಜಡವಸ್ತುಗಳಲ್ಲಿಯೂಪರಮಾತ್ಮಇದ್ದಾನೆಎನ್ನುತ್ತದೆಭಾರತ. ಆದರೆತನ್ನವರನ್ನೇಕೀಳೆಂದುದೂರತಳ್ಳುವ, ತಾವುಹೀನರುಎಂದುಭಾವಿಸಿದೂರವೇಉಳಿಯುವಜನರಿರುವುದುಭಾರತದಲ್ಲಿ.

• ಹಾಕಿ, ಚೆಸ್, ಕರಾಟೆ, ಬಾಕ್ಸಿಂಗ್ಗಳನ್ನುಜಗತ್ತಿಗೆತೋರಿದ್ದುಭಾರತ. ಮೊದಲಓಲಂಪಿಕ್ವೈಯಕ್ತಿಕಸ್ವರ್ಣಗೆಲ್ಲಲುಸ್ವಾತಂತ್ರ್ಯಾನಂತರ 62 ವರ್ಷಗಳುಬೇಕಾದವೇ ?

• ಜಗತ್ತಿಗೆನೀತಿನಿಯಮನಡವಳಿಕೆಜೀವನಪದ್ಧತಿಗಳನ್ನುಹೇಳಿಕೊಟ್ಟಭಾರತವುಜಗತ್ತಿನಭ್ರಷ್ಟಾಚಾರದಪಟ್ಟಿಯಲ್ಲಿ೮೪ನೇಸ್ಥಾನದಲ್ಲಿದೆ. ‘ಕಾಯಕವೇಕೈಲಾಸ’ ಎಂದಈಕರ್ಮಭೂಮಿಯಲ್ಲಿಪಡ್ಡೆಹೊಡೆದುಕೊಂಡುಸುತ್ತುತ್ತಿರುವಯುವಕರಸಂಖ್ಯೆ೫ಕೋಟಿಯಂತೆ. ಇದುಇಂಗ್ಲೆಂಡಿನಜನಸಂಖ್ಯೆಯ

Monday 28 May 2012

ತರಲೆ ಪ್ರಶ್ಣೆಗಳು....!

ತರಲೆ ಪ್ರಶ್ಣೆಗಳು....!




೧೬."ಅಪಾಯ" ಚಿಹ್ನೆ ಯ ತಲೆಬುರುಡೆಯ ಅಡಿಯಲ್ಲಿರುವ ಎರಡು ಎಲುಬು 


ಯಾವ ಅಂಗದ್ದು..?!!

೧೭.ಹೈವೇ ಪೋಲೀಸ್ ಚೆಕ್ಕಿಂಗ್ ನ ಸ್ವಲ್ಪ ಮೊದಲು "ಚೆಕ್ಕಿಂಗ್ ಇದೆ’ ಎಂಬ 



ಮಾಹಿತಿಯ ಬೋರ್ಡ್ ಹಾಕುವುದೇಕೆ..?!!

೧೮.ಕಪ್ಪು-ಬಿಳುಪಿನಲ್ಲಿ ಬಿಳಿಯಲ್ಲಿ ೭ ಬಣ್ಣಗಳಿದ್ದರೆ ಕಪ್ಪಿನೊಳಗೆಷ್ಟುಬಣ್ಣಗಳಿವೆ..?!!


೧೯.ಮನುಷ್ಯನ ಶ್ರಮವನ್ನು ಕಡಿಮೆ ಮಾಡುವುದು ಯಂತ್ರಗಳ ಕೆಲಸ ವಾದರೆ 



ವ್ಯಾಯಾಮ ಯಂತ್ರದ ಕೆಲಸವೇನು..?!!


೨೦.ಹುಚ್ಚರು ನೆಮ್ಮದಿಯನ್ನು ಹೊಂದಿರುತ್ತಾರೆಯೇ..?!!

Sunday 15 April 2012

* ಹಕ್ಕೆಹೊಳ್ಳಿ.........!!!


ಹವೀಕರ ಹಕ್ಕೆಹೊಳ್ಳಿ.........!!!

ಯೆಂಗ ಹವೀಕರು ಹೇಂಗೆ ಅಂದ್ರೆ 
ಯೆಮ್ಮನೀಗೆ ಬಂದ್ ಭಾವನ ಕರಕಂಡು 
ಆಚಿ ಮನಿ ಅತ್ಗೆ ಮಾತಾಡ್ಸ್ಗ್ಯ ಬಂದಾಂಗಾತು ಹೇಳಿ 
ಅವರ ಮನಿ ಹಕ್ಕೆ ಹೊಳ್ಳಿಲಿ ಕುಂತು ಅಲ್ಲಿದೇ ಕವಳಾನೂ ಹಾಕ್ಯಂಡು 
ತುದೀ ಮನಿ ಕೂಸಿನ್ ನೋಡಾಲೆ ಸಣಕಲ ಮಾಣಿ ಬಂದಿದ್ದ 
ಈ ಕೂಸೀಗೆ ಡಾಕ್ಟರು ಇಂಜಿನೀಯರೇ ಆಯೆಕ್ಕಡ. 
ಆನೂ ಹೇಳಿದ್ದಿ ಕೂಸೇ ಇನ್ನೂ ವಂದೆರಡು ವರ್ಷ ತಡ ಆದ್ರೂ 
ಚಿಂತಿಲ್ಲೆ ನೀ ಹಾಂಗೇ ಮಾಡೂ ಹೇಳಿದ್ದಿ.ಹೇಳಿ 
ಯಾರದೊ ಮನೆ ಸುದ್ದಿ ಅವರಮನೇಲಿ ಹೇಳಿಕ್ಕಿ ಬಪ್ಪಕಾರೆ 
ಹೊಗೆಸಪ್ಪ ಅಂಡಿನೇ ತೆಗದು ಕಿಶ್ಗೆಗೆ ತುರ್ಕ್ಯ ಬತ್ಯ. 
ಇಲ್ಲಿ ನೋಡೀರೆ ಯೆಮ್ಮನಿ ಕೂಸು ಬಳೆ ಸಾಬನ ಕೈಲಿ ಬಳಿ ವಂದೇ ತುಂಬಿಸ್ಕ್ಯಂಜಿಲ್ಲೆ .....
...... ಅದನ್ನೂ ತುಂಬಿಸ್ಕ್ಯಂಡು ಅಪಾ....... ಹೇಳ್ತು . ಯೆಂತ ಮಾಡಿ ಸಾಯವೇ? 
ಅಡ್ಕೀಗೆ ದರ ಇಲ್ಲೇ ಯೆಂತಾ ಮದ್ವ ಮಣ್ಕಾಲ್ ಮಾಡೂದನಾ ಹೇಳಕರೆ 
ಈ ಭಾವಂಗೆ ಕೂಸಿನ್ ನೋಡಾಲೆ ಬಂದವಂಗೆ 
ಅಡ್ಕೆ ದರ ಹೆಚ್ಚಾದ್ರೂ ವಂದೇಯಾ ಕಮ್ಮಿಯಾರೂ ವಂದೇಯಾ 
ಅವ ಬೆಂಗ್ಳೂರಲ್ಲಿ ಬದ್ಕವ ಹೇಳದು ಮರ್ತು ಹೋಗಿರ್ತು!!!! 
ಥತ್ತೇರಿಕೆ...............................!!!!!!!!

* ನಾನೇನಾಗಲೀ ನಿನಗೆ?



ಓ ...ನವಿಲೇ.... ನೀನೆಷ್ಟು ಬಣ್ಣ, ನೀನೆಷ್ಟು ಸುಂದರ,
ಆ ನಿನ್ನ ನಾಟ್ಯವೇ ಚೆನ್ನ...!
ಓ... ಕೋಗಿಲೆಯೇ... ನೀನೆಷ್ಟು ಕಪ್ಪು, ನೀನೆಷ್ಟು ಸಣ್ಣ.
ಆ ನಿನ್ನ ಕುಹೂ ಕೂಗೇ ಚೆನ್ನ
ಓ... ಹಂಸವೇ.... ನೀನೆಷ್ಟು ಬಿಳಿ, ನೀನೆಷ್ಟು ಶುದ್ಧ.
ಆ ನಿನ್ನ ಹೆಸರೇ ಚೆನ್ನ..!
ಏನು ಮಾಡಲೀ....?
ಓ.. ನವಿಲೇ, ನಿನಗೆ ನಾಟ್ಯ ಮರೆತೋಗಿದೆ,
 ಮೋಡವೇ ಇಲ್ಲವಲ್ಲಾ..
ಓ..ಕೋಗಿಲೆಯೇ,ನಿನಗೆ  ಕೂಗು ಮರೆತೋಗಿದೆ,
 ಮಾಮರವೇ ಒಣಗಿನಿಂತಿದೆಯಲ್ಲಾ.
ಓ ..ಹಂಸವೇ ನಿನ್ನ ಶುದ್ಧತೆ ಕಳೆದೋಗಿದೆ,
ಸುತ್ತ ಕಾರ್ಗತ್ತಲಲ್ಲಾ,
ಓ.. ದೆವ್ವವೇ.. ನವಿಲಂತೆ ನರ್ತಿಸುವ ಕೋಮಲೆಯರಿಲ್ಲಾ,
................. ಕೋಗಿಲೆಯ ಕಂಠದ ಹಾಡುಗರಿಲ್ಲಾ,
..................ಹಂಸ  ಈ ಜಗದಲ್ಲಿ ಇರುವ ಪರಮಹಂಸರು
..................ನಿನಗೇ ಕಾವಿಯುಡಿಸಿಬಿಟ್ಟಿದ್ದಾರೆ,
...................ಓಹ್ ನೀನೆಲ್ಲಿ? ಇಲ್ಲ... ಕಾಣಬೇಕು...
....................ಕಾಣಿಸಬೇಕು.. ನೀನು....ಅದು... ಇದು ...,ಎಲ್ಲಾ,
ಈ  ಧರೆಯ ಧೂಳು ಹೊಡೆಯಬೇಕು,
ಆ ಭಾನುವಿನ ಪ್ರಭೆಯಲ್ಲಿ ಬೆಳಗಬೇಕು ಈ ಧರಣಿ
....ಬಾ....ಬಾ...ಬಂದು, ಕುಣಿ ನೀ ನವಿಲಾಗಿ, ನಾ ಮೋಡವಾಗುವೆ.
....ಬಾ....ಬಾ...ಬಂದು, ಕೂಗು ನೀ ಕೋಗಿಲೆಯಾಗಿ, ನಾ ಮಾಮರವಾಗುವೆ
....ಬಾ....ಬಾ...ಬಂದು, ಹಾರು ನೀ ಹಂಸವಾಗಿ, ನಾನೇನಾಗಲೀ ನಿನಗೆ?
ನೀಲಾಕಾಶವಾಗಲೇ ? ಪದ್ಮ ಸರೋವರವಾಗಲೇ ?
ನನ್ನ ಮನದ ನೀಲಾಕಾಶದಲ್ಲಿ  ಹಾರು,


ಅದು ನಿಷ್ಕಲ್ಮಷ ನಿರಭ್ರ...
ನನ್ನ ಹೃದಯ ಸರಸಿಯಲ್ಲಿ ಹಾರಾಡು.
ಅದು ನಿಷ್ಕಪಟ,ನಿರಾತಂಕ
ಬಾ...ಬಾ...

* ನನಗೇ ಬುದ್ಧಿ ಬಂದಿತ್ತು...!


    ನಾನು ಸಣ್ಣವನಾಗಿದ್ದೆ ಆಗ,( ಇಷ್ಟು ದೊಡ್ಡಾದ್ರೂ ಇನ್ನೂ ಬುದ್ಧಿ ಬಂಜಿಲ್ಯನಾ ಹೇಳಿ ಯೆನ್ನಪ್ಪ ಬೈದಾಗಲೇ ನಾನು ದೊಡ್ಡವನಾಗಿಬಿಟ್ಟಿದ್ದೆ) ಒಂದು ದಿನ ಪಕ್ಕದೂರಿನಲ್ಲಿರುವ ಒಂದು ಕಲ್ಲು ಬಸವನ ನೋಡಲೆಂದು ಒಂದು ನಮ್ಮ ಗುಂಪು ದಾರಿ ಸವೆಸಿತು. ನಾಮುಂದು ತಾಮುಂದು ಎಂದು ಓಡಿಕೊಂಡೇ ಹೋದೆವು ಅನ್ನಿ. ಅಂತೂ ಗುಡ್ಡ ಇಳಿದು ಹೊಳೆ ದಾಟಿ ಮತ್ತೊಂದು ಗುಡ್ಡ ಏರಿದರೆ ಅಲ್ಲಿ ಒಂದು ಪಾಳುಬಿದ್ದ ದೇವಸ್ಥಾನದ (ಅದು ಈಶ್ವರನ ದೇವಾಲಯ ಇತ್ತೆಂದು ಕಾಣುತ್ತದೆ) ಮುಂಭಾಗದಲ್ಲಿ ಒಂದು ದೊಡ್ಡ ಕಲ್ಲಿನ ಬಸವ ಇತ್ತು.. ನಾವು ಹೋದದ್ದು ಏಪ್ರಿಲ್-ಮೇ ರಜೆಯಲ್ಲಿ, ತುಂಬಾ ಸೆಕೆ... ಆದರೂ ಗುಡ್ಡದಲ್ಲಿ ಸಿಗುವ ತರಹೇವಾರಿ ಹಣ್ಣುಗಳ ರುಚಿನೋಡಬಹುದಾದ ಕಾಲ. ಮುಳ್ಳೇ ಹಣ್ಣು,ಕರಜಲು ಹಣ್ಣು.ಗೇರ ಹಣ್ಣು, ಬೊಕಳೇ ಹಣ್ಣು. ವಾಂಟೇ ಹಣ್ಣು,ಸಂಪಿಗೆ ಹಣ್ಣುಅಂಡಮುರುಗಲ ಹಣ್ಣು, ಬಿಳಿಮುಳ್ಳೇಹಣ್ಣು, ಹೀಗೇ ಹೊಟ್ಟೆ ತುಂಬುತ್ತಿತ್ತು. ಆದರೂ ಸೆಕೆ...ಅಬ್ಬಾ...
    ಅಂತೂ ಬಸವನ ಕಾಲ ಬುಡಕ್ಕೆ ಬಂದಾಯ್ತು. ಅತ್ತಿತ್ತ ನೋಡಿದೆವು ಯೇನೂ ವಿಶೇಷವಿಲ್ಲ ಬರೇ ಬೋಳು ದೇವಾಲಯ.. ಅದೂ ಪಾಳು. ಪೂಜೆಯಿಲ್ಲ,ನೈವೇದ್ಯವಿಲ್ಲಾ...ಅಸಲಿಗೆ ಅಲ್ಲಿ ದೇವರೇ ಇಲ್ಲಾ.. ಅಂತೂ ಬಸವನೊಬ್ಬ ಇದ್ದ. ಅಲ್ಲಿ ಇಲ್ಲಿ ತಿರುಗಿ ನೋಡುತ್ತಿದ್ದೆವು.. ನಮ್ಮ ಗ್ಯಾಂಗಿನ ನಾಯಕ ದಿವಾಕರ !!! ಬಲು ಜೋರು, ಅಷ್ಟೇ ಹಾಸ್ಯ ಸ್ವಭಾವದವ.. ಅವ...ಇದ್ದಕ್ಕಿದ್ದಂತೇ.."ಅಯ್ಯೊಯ್ಯೋ... ಅಬ್ಬಾ...." ಎಂದು ಕೈ ಕುಡುಗುತ್ತ ನಮ್ಮ ಕಡೆಗೆ ಬಂದ . ನಮ್ಮೊಟ್ಟಿಗಿನ ಕಿತ್ತೂರು ರಾಣಿ ಮಂಗಲ ಕೇಳಿದಳು "ಅಣ್ಣ.. ಯೆಂತದೂ..." ಅದಕ್ಕೆ ದಿವು.." ಇಲ್ಲ್ ನೋಡು ,'ಆಬಸವನ ಮೂಗಲ್ಲಿ ಒಂದ್ ಬಾರಿ ಕೈ ಬೆರಳಾಕು..ನೀನು... ಏಷ್ಟ್ ತಂಪೂ..ಆಹಾಹಾ..... ' ಅಂದ.. ಮಂಗಲಾ ಘಾಟಿ. "ಹೌದಾ... ನಾನೂ ಕೈ ಹಾಕುತ್ತೇನೆ ಹಾಗಾದರೆ'' ಎಂದು ಅವಳೂ ಬೆರಳು ತೂರಿಸಿದಳು.. ಅಮ್.. ಅಯ್ಯೊಯ್ಯೋ..ಎಷ್ಟ್ ತಂಪಲ್ಲವಾ..? ಏ ರಾಮೂ... ಇಲ್ಲ್ ಬಾ..ನೋಡು...ಇಲ್ಲಿ ಕೈ.ಹಾಕೂ...ನೀನೂ... ಅಹಾ...ತಂ..ಪೂ... ಎಂದಳು ಕೈ ಉಜ್ಜಿಕೊಳ್ಳುತ್ತ........ನನಗ್ಯಾಕೋ ಅನುಮಾನಾ..... ಮೊದಲಿಂದಾನೂ ಹಾಗೇ ನಾನು ಯಾವುದನ್ನೂ ನಂಬೋ ಗಿರಾಕಿ ಅಲ್ಲಾ... ಅದಕ್ಕೇ..ನಾನು ಮತ್ತೊಬ್ಬ ನಮ್ಮ ಅಣ್ಣ ದತ್ತಣ್ಣನಿಗೆ ಕೈಹಾಕಲು ಸೂಚಿಸಿದೆ. ಅವನಿಗೆ ಅದಾಗಲೇ ಮಂಗಳ ಕಣ್ಸನ್ನೆ ಮಾಡಿ ಆಗಿತ್ತು... ಅವ ಕೈ ಹಾಕಿದೋನು... ಅಮ್ಮಾ..ಅಯ್ಯೊಯ್ಯೋ...ಅದೆಷ್ಟು ತಂ....ಪೂ..ಅನ್ನುತ್ತಲೇ ಕೈ ಹಿಂದಕ್ಕೆಳೆದ.....ಆದರೂ...ಯಾಕೋ,,ಅನುಮಾನ ನನಗೆ.... ಏಕೆಂದರೆ ಈ ಮಂಗಲ ನನ್ನ ಓರಗೆಯವಳು.. ನಾವು ಮೂರ್ನಾಲ್ಕುಜನ ಸೇರಿ ಹೋಗುತ್ತಿದ್ದಾಗ ಹಲಸಿನ ಮರ ಹತ್ತಿ ಹಲಸಿನ ಹಣ್ಣು ಕೆಡವಿ ಬಿರಿದು ತಿನ್ನುತ್ತಿದ್ದೆವು ಆಗ ಅವಳು ಎಲ್ಲರಿಗಿಂತ ಮೊದಲೇ ಮೇಲೆ ಹತ್ತಿಬಿಡುತ್ತಿದ್ದಳು..ನಮಗೆಲ್ಲ..ಓ ..ಇವಳು ಹಣ್ಣು ಕೆಳಗೆ ಕೆಡವುತ್ತಾಳೆ ನಾವೆಲ್ಲ ಪಾಲು ಮಾಡಿ ತಿಂದರಾಯಿತು. ಎಂದುಕೊಂಡಿದ್ದರೆ... ಇವಳು ಮೇಲೇನೇ ಹಣ್ಣನ್ನು ಬಿರಿದು ತಿನ್ನೋದಕ್ಕೇ ಕುಳಿತುಬಿಡುತ್ತಿದ್ದಳು ನಾವು ಮೇಲೆ ನೋಡುತ್ತ ಜೊಲ್ಲುಸುರಿಸಿದ್ದೇ ಲಾಭಾ... ಬೇಳೆ ಮಾತ್ರ ಕೆಳ್ಗೆ ಉದುರುತ್ತಿತ್ತು...ಥತ್ತೇರಿಕೇ..
   ಈ ಎಲ್ಲ ಅನುಭವಗಳೇ ನನ್ನನ್ನು ಅವಿಶ್ವಾಸಿಯನ್ನಾಗಿ ಮಾಡಿದ್ದು.... ಅಂತೂ ಎಲ್ಲರೂ ಬಸವನ ಮೂಗಿಗೆ ಕೈ ಬೆರಳು ತೂರಿಸಿ ಅಮ್ಮಾ,ಅಯ್ಯೊಯ್ಯೋ,,ತಂಪೂ..ಎಲ್ಲಾ ಹೇಳಿದ್ದು ನೋಡಿ ನನಗೂ ತಡೆಯಲಾಗಲಿಲ್ಲಾ... ಸಾಲದ್ದಕ್ಕೆ ಸೆಕೆ ಬೇರೆ ತಂಪಾದರಾಗಲೀ ಎನ್ನುವ ಯೋಚನೆ ಬಂದು ಏನಾದರಾಗಲೀ ಮೊದಲು ಒಂದು ಚಿಕ್ಕ ಕೋಲನ್ನು ಬಸವನ ಮೂಗಿನೊಳಕ್ಕೆ ತೂರಿಸಿ ತಿರುವಿದೆ ನೋಡಿ....... ಆಗ ಅಲ್ಲಿಂದ  ಪುಳಕ್ ನೆ ಬಿತ್ತು ನೋಡಿ ಒಂದು ಕರೇ ಚೇಳು..... ಆಹಾಹಾ..ಈ ಖರ್ಮದವರು ನನ್ನನ್ನು ಹಳ್ಳಕ್ಕೇ ಹಾಕ ಬೇಕೆಂದಿದ್ದರು...! ಮಗ ನಾನು ಬೀಳುವವನೇ...? ಇಷ್ಟಾಗುವಾಗ ಈ ಖಳ್ಳನನ್ನ ಮಕ್ಕಳು ಬಸವನ ಬಾಲ ಅಳೆಯುತ್ತಿದ್ದರು...ಮುಸಿ ಮುಸಿ ನಗುತ್ತಾ....
     ಇದುವರೆಗೂ ಯೆಲ್ಲ ಇವರು ಆಹಾಹಾ ಎಂದದ್ದು ತಂಪಾಗಿ ಅಲ್ಲ ...! ಕೈಬೆರಳಾಕಿದಾಗ ಆ ಕರಿ ಚೇಳು ಮಾಡಿತ್ತಲ್ಲಾ ಇವರ ಬೆರಳಿಗೆ ಸರ್ಜರಿನಾ.... ಆದ್ರೂ ಬಡ್ಡೀಮಕ್ಕಳು ಅಯ್ಯೊಯ್ಯೊ ತಂಪೂ ಎಂದೇ ಬಡಕೊಂಡರಲ್ಲಾ..!!! ಆಮೇಲೆ ಒಬ್ಬೊಬ್ಬರ ಕೈಬೆರಳು ನೋಡಿದರೇ..... ಬಾಳೇಕಾಯಿ ಆದ ಹಾಗಿತ್ತು...! ಈ ಯೆಲ್ಲಾ ಮಂಗನಾಟಗಳ ಮುಗಿಸಿ ಮನೆಗೆ ಬಂದು ಅಮ್ಮನ ಹತ್ತಿರ ಹೇಳಿದರೆ.... ಹೌದಾ... ನಿನಗೇನೂ ಆಗಿಲ್ಲವಲ್ಲಾ,,,, ಇದನ್ನೇ ಹೇಳೂದು ದೊಡ್ಡವರ ಲಕ್ಷಣ ಅಂತಾ.... ಬುದ್ಧಿ ಬಂದಾಗ ಹಿಂಗೆಲ್ಲಾ ಆಗುವುದಿಲ್ಲಾ ತಂತಾನೇ ವಿಚಾರ್ ಮಾಡುವ ಮನಸ್ಸು ಆಗುತ್ತದೆ . ಎಂದು ಹೇಳಿದಾಗ ನಾನು ನಿಜವಾಗಲೂ 'ದೊಡ್ಡವನಾಗಿದ್ದೇನೆ'...! ನನಗೂ 'ಬುದ್ಧಿ ಬಂದಿದೇ' ಅಂದುಕೊಂಡಿದ್ದು.

* "ಕಲ್ಪನಾ ದಾರಿದ್ರ್ಯ"


ಒಂದು ದಾರಿಯಲ್ಲಿ ಪಥಿಕನೋರ್ವ ಬರುತ್ತಿದ್ದ. ದಾರಿಯಂಚಿನ ಮರದ ಕೆಳಗೆ ಕುಳಿತ ಓರ್ವ ಭಿಕ್ಷುಕ ತನ್ನೆದುರು ಇದ್ದ ಅಲ್ಯೂಮೀನಿಯಂ ತಟ್ಟೆಯಲ್ಲಿ ಇರುವ ಯಾರೋ ಕೊಟ್ಟ ರೊಟ್ಟಿಯನ್ನು ಚೂರು ಮಾಡಿ ಕೈಗೆ ತೆಗೆದುಕೊಂಡು ಇನ್ನೊಂದು ಕೈಯ್ಯಲ್ಲಿ ಅಜ್ಜಿಕೊಂಡು ಬಾಯಿಗಿಡುತ್ತಿದ್ದ. ಈ ಚಟುವಟಿಕೆಯನ್ನು ಸುಮಾರು ದೂರದಿಂದಲೂ ಗಮನಿಸಿಕೊಂಡು ಬರುತ್ತಿದ್ದ ಆ ಪಥಿಕ ಭಿಕ್ಷುಕನ ಹತ್ತಿರ ಬಂದು ಕೇಳಿದ. "ಅಯ್ಯಾ, ಆವಾಗಿನಿಂದ ನಿನ್ನನ್ನು ಗಮನಿಸುತ್ತಿದ್ದೇನೆ, ಅದೇನೋ ರೊಟ್ಟಿಯ ಚೂರನ್ನು ನಿನ್ನ ಒಂದು ಬರಿಗೈಗೆ ಅಜ್ಜಿ ಅಜ್ಜಿ ತಿನ್ನುತ್ತಿರುವೆಯಲ್ಲಾ ಏಕೆ..?" ಅದಕ್ಕೆ ಭಿಕ್ಷುಕ " ಅಣ್ಣಾ, ನನಗೆ ಈ ರೊಟ್ಟಿಯನ್ನು ಕೊಟ್ಟವರು ನೆಂಚಿಕೊಳ್ಳಲು ಏನನ್ನೂ ಕೊಡಲಿಲ್ಲ , ನನ್ನ ಹತ್ತಿರ ಹಾಕಿಕೊಳ್ಳಲು ಚೂರು ಉಪ್ಪೂ ಇಲ್ಲ, ಯೇನು ಮಾಡೋದು ಖಾಲಿ ತಟ್ಟೆ ರೊಟ್ಟಿ ತಿನ್ನಲಾಗೋದಿಲ್ಲಾ,ಸಪ್ಪೆ, ಹಾಗಾಗಿ ಈ ಕೈಯ್ಯಲ್ಲಿ ಉಪ್ಪು ಇದೆ ಎಂದು ಭಾವಿಸಿಕೊಂಡು ನೆಂಚಿ ನೆಂಚಿ ತಿನ್ನುತ್ತಿದ್ದೇನೆ" ಎಂದ. ಇದನ್ನು ಕೇಳಿದ ಆ ಪಥಿಕನಿಗೆ ಅನಿಸಿತು'ಅಯ್ಯೋ ಖರ್ಮವೇ.... ಇವರಿಗೆ ಎಷ್ಟು ಮಾಡಿದರೂ ಅಷ್ಟೇ.... ಉದ್ಧಾರವಾಗುವುದಿಲ್ಲಾ.. ಅಲ್ಲಾ... ಈ ಬರಿಗೈಯಲ್ಲಿ ಉಪ್ಪು ಇದೇ ಎಂದು ನೆಂಚಿ ತಿನುವುದರ ಬದಲು ತುಪ್ಪ-ಸಕ್ಕರೆಯೇ ಇದೆ ಎಂದುಕೊಂಡು ತಿನ್ನಬಹುದಿತ್ತಲ್ಲಾ... ಅದೂ ದಾರಿದ್ರ್ಯವೇ..... ಇದನ್ನೇ ಅಲ್ಲವೇ "ಕಲ್ಪನಾ ದಾರಿದ್ರ್ಯ...!" ಎನ್ನುವುದೂ.... ಅಂದುಕೊಂಡು " ಆಯಿತಪ್ಪಾ...... ಹಾಗೇ ಆಗಲೀ..." ಎನ್ನುತ್ತ ಮುಂದೆ ಸಾಗಿದ...
.......ನೀವೇನಂತೀರಿ........